ಫ್ಯಾಬ್ಲೀಯೊ
	ಮಧ್ಯಯುಗದ ಫ್ರಾನ್ಸಿನಲ್ಲಿ ಬಲು ಜನಪ್ರಿಯವಾಗಿದ್ದ ಕಥನ ಗೀತೆಗಳು. ಕರ್ತೃಗಳು ಯಾರೋ ತಿಳಿಯದು. ಇವುಗಳಲ್ಲಿ ನೀತಿಬೋಧನೆ ಮತ್ತು ಕ್ರೈಸ್ತ ಪುರೋಹಿತರ ವಿಡಂಬನೆ ಉಂಟು. ಒರಟಾದ ಹಾಸ್ಯವೂ ಉಂಟು. ಪ್ರಣಯಕ್ಕೆ ಸಂಬಂಧಿಸಿದ ಕಥೆಗಳೂ ಇಲ್ಲದಿಲ್ಲ. ಇವು ಸಮಕಾಲೀನ ಜೀವನದ ಚಿತ್ರವನ್ನು ಕೊಡುತ್ತವೆ. ಮೇಲುವರ್ಗದವರಲ್ಲಿ ಹೇಗೋ ಹಾಗೆ ಕೆಳವರ್ಗದವರಲ್ಲೂ ಇವು ಜನಪ್ರಿಯವಾಗಿದ್ದುವು. ಇವು ಮುಂದೆ ಬಂದ ನೊವೆಲ ಕಿರುಕಾದಂಬರಿಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದುವು.		
(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ